
ಹದಿಹರೆಯದವರು ಏಕೆ ಕುಡಿಯುತ್ತಾರೆ?
ಗುಣಾತ್ಮಕ ಸಂಶೋಧನೆಯನ್ನು ಆಧರಿಸಿ ಹದಿಹರೆಯದವರು ಕುಡಿಯಲು ಹಲವಾರು ವಿಭಿನ್ನವಾದ ಕಾರಣಗಳಿವೆ ಮತ್ತು ಆಲ್ಕೋಹಾಲ್ ಸಾಮಾಜಿಕ ಸೆಟ್ಟಿಂಗ್ಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತದೆ, ಇದು ಕೇವಲ ವರ್ತನೆಯನ್ನು ಗುರುತಿಸುವುದಿಲ್ಲ ಜೊತೆಗೆ ವಯಸ್ಕರ ನಡವಳಿಕೆಯನ್ನು ಪ್ರಶ್ನಿಸುತ್ತದೆ.
ಪೋಷಕರಾಗಿ ನೀವು ಮಕ್ಕಳು ಏಕೆ ಆಲ್ಕೋಹಾಲನ್ನು ಕುಡಿಯುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಪ್ರಮುಖವಾಗಿರುವುದರಿಂದ ಅವರ ವಿವೇಚನೀಯ ಆಯ್ಕೆಗಳ ಮೇಲೆ ನಿಮ್ಮ ಪ್ರಭಾವಬೀರಬಹುದು.
ಮಕ್ಕಳಿಗೆ ಆಲ್ಕೋಹಾಲ್ನ ಮೊದಲ ಅನುಭವ ಅಹಿತಕರವಾಗಿದ್ದರೂ ಸಹ ಅದರ ರುಚಿ ಇಷ್ಟವಾಗದಿರಬಹುದು ಅಥವಾ ಅವರ ಅಭಿಪ್ರಾಯವೇನಾಗಿದ್ದರೂ ಬಹುಕಾಲ ನಿಲ್ಲುತ್ತದೆ. ಅಪ್ರಾಪ್ತ ವಯಸ್ಸಿನವರು ಕುಡಿಯುವುದರಿಂದಾಗುವ ಅಪಾಯಗಳ ಕುರಿತು ಅವರಿಗೆ ತಿಳಿಯಪಡಿಸಬೇಕು ಆದರೆ ಅವರು ಕೇಳುವುದಿಲ್ಲ ಅಥವಾ ನಂಬುವುದಿಲ್ಲ ಹೊರತಾಗಿ ಆಲ್ಕೋಹಾಲಿನ ನೈಜ ಗುಣವನ್ನು ತಿಳಿಸುವುದಲ್ಲದೆ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅವರ ಮನಸ್ಸಿನಲ್ಲಿ ಆಳವಾಗಿ ತುಂಬಬೇಕು.
ಅಪಾಯ ಎದುರಿಸುವಿಕೆ—ಇಪ್ಪತ್ತರ ಹರೆಯದಲ್ಲಿ ಮೆದುಳು ಉತ್ತಮ ಬೆಳವಣಿಗೆ ಹೊಂದುತ್ತದೆ ಎಂದು ಸಂಶೋಧನೆ ತೋರಿಸುತ್ತದೆ, ಈ ಸಮಯದಲ್ಲಿ ಮುಖ್ಯವಾದ ಸಂವಹನ ಸಂಪರ್ಕಗಳನ್ನು ಇರಿಸಿಕೊಳ್ಳಲು ಇದು ಮುಂದುವರಿಸುತ್ತದೆ ಹಾಗೂ ಅದರ ಹೆಚ್ಚಿನ ಕ್ರಿಯೆಯನ್ನು ಸಂಸ್ಕರಿಸುತ್ತದೆ. ಈ ದೀರ್ಘ ಕಾಲದ ಬೆಳವಣಿಗೆ ಅವಧಿಯು ಹದಿಹರೆಯದ ಲಕ್ಷಣವಾಗಿರುವ ಕೆಲವು ವರ್ತನೆಯನ್ನು ವಿವರಿಸುವಲ್ಲಿ ಸಹಾಯ ಮಾಡಬಹುದು ಎಂದು ವಿಜ್ಞಾನಿಗಳು ಭಾವಿಸುತ್ತಾರೆ—ಅಂದರೆ ಹೊಸತನವನ್ನು ಬಯಸುವ ಅವರ ಒಲವು ಮತ್ತು ಸಂಭವನೀಯವಾಗಿ ಅಪಾಯದ ಸಂದರ್ಭಗಳು. ಕೆಲವು ಹದಿಹರೆಯದವರಿಗೆ, ರೋಮಾಂಚನ ಪಡೆದುಕೊಳ್ಳುವುದರಲ್ಲಿ ಮದ್ಯಸಾರದೊಂದಿಗೆ ಪ್ರಯೋಗವೂ ಒಳಗೊಂಡಿರಬಹುದು. ಬೆಳವಣಿಗೆಯ ಬದಲಾವಣೆಗಳು ಹದಿಹರೆಯದವರು ಅಷ್ಟು ಹಿಂಜರಿಯದೆ ಏಕೆ ಕ್ರಿಯಾಶೀಲವಾಗಿರುತ್ತಾರೆ ಎಂಬುದಕ್ಕೆ ಸಂಭವನೀಯ ಶಾರೀರಿಕ ವಿವರಣೆಯನ್ನು ಸಹ ನೀಡಬಹುದು, ಅವರ ಕ್ರಮಗಳನ್ನು ಹೆಚ್ಚಾಗಿ ಗುರುತಿಸದೆ ಇರುವುದು—ಅಂದರೆ ಕುಡಿಯುವುದು—ಪರಿಣಾಮಗಳನ್ನು ಹೊಂದುವುದು.
ನಿರೀಕ್ಷೆಗಳು —ಜನರು ಕುಡಿತವನ್ನು ಪ್ರಾರಂಭಿಸಿದ್ದಾರೆಯೆ ಮತ್ತು ಎಷ್ಟು ಎಂಬುದನ್ನು ಪರಿಗಣಿಸಿ, ಜನರು ಮದ್ಯಸಾರ ಮತ್ತು ಅದರ ಪರಿಣಾಮಗಳೂ ಸಹ ಅವರ ಕುಡಿತದ ಲಕ್ಷಣಕ್ಕೆ ಪರಿಣಾಮಬೀರುತ್ತದೆ. ಹದಿಹರೆಯದವರು ಕುಡಿತವು ಹೆಚ್ಚು ಸಂತೋಷಕರ ಅನುಭವವನ್ನುಂಟು ಮಾಡುತ್ತದೆ ಎಂದು ನಿರೀಕ್ಷಿಸುವವರು ಬೇರೆಯವರಿಗಿಂತಲೂ ಹೆಚ್ಚು ಕುಡಿಯುವ ಸಾಧ್ಯತೆ ಇರುತ್ತದೆ. ಮದ್ಯಸಾರದ ಸಂಶೋಧನೆಯ ಒಂದು ಪ್ರಮುಖ ಅಂಶವೆಂದರೆ ಹದಿಹರೆಯದವರು ಮತ್ತು ಯುವ ಪೀಳಿಗೆಯ ಮೂಲಕ ಬಾಲ್ಯದಲ್ಲಿನ ಕುಡಿತದ ಅಭ್ಯಾಸಗಳಿಗೆ ಹೇಗೆ ನಿರೀಕ್ಷೆಗಳು ಪ್ರೇರಣೆಯಾಗುತ್ತವೆ ಎಂಬುದು ಪ್ರಮುಖ ವಿಷಯವಾಗಿದೆ. ಮದ್ಯಸಾರದ ಕುರಿತು ನಂಬಿಕೆಗಳು ಮಗುವು ಪ್ರಾಥಮಿಕ ಶಾಲೆಗೆ ಮೊದಲೆ, ಜೀವನದ ಪ್ರಾರಂಭದಲ್ಲಿಯೆ ಹೆಚ್ಚು ಮುಂಚಿತವಾಗಿ ಸ್ಥಾಪನೆಗೊಳ್ಳುತ್ತದೆ.
ಮದ್ಯಸಾರದ ಕುರಿತು ಸೂಕ್ಷ್ಮತೆ ಮತ್ತು ಸಹನೆ—ಅರೆನಿದ್ರಾವಸ್ಥೆ, ಸಹಯೋಗದ ಕೊರತೆ ಮತ್ತು ಹಿಂತೆಗೆದುಕೊಳ್ಳುವಿಕೆ/ಹ್ಯಾಂಗ್ಓವರ್ನಂತಹ ಕುಡಿತದ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುವ ಮೊದಲು ಹಲವಾರು ಯುವ ಪೀಳಿಗೆಯು ವಯಸ್ಕರಿಗಿಂತಲೂ ಹೆಚ್ಚು ಪ್ರಮಾಣದ ಮದ್ಯಸಾರವನ್ನು ಸೇವಿಸುತ್ತಾರೆ ಎಂಬುದನ್ನು ವಿವರಿಸಲು ವಯಸ್ಕರ ಮೆದುಳು ಮತ್ತು ಪಕ್ವಗೊಳ್ಳುತ್ತಿರುವ ಹರೆಯದವರಲ್ಲಿನ ಮೆದುಳಿನ ನಡುವಿನ ವ್ಯತ್ಯಾಸಗಳು ಸಹ ಸಹಾಯ ಮಾಡಬಹುದು. ಈ ಅಸಮಾನ್ಯ ಸಹನೆಯು ಯುವ ವಯಸ್ಕರಲ್ಲಿ ಬಿಂಜ್ ಕುಡಿತದ ಹೆಚ್ಚು ಪ್ರಮಾಣವನ್ನು ವಿವರಿಸುವಲ್ಲಿ ಸಹಾಯ ಮಾಡಬಹುದು. ಅದೇ ಸಮಯದಲ್ಲಿ, ಹದಿಹರೆಯದವರು ವಿಶೇಷವಾಗಿ ಕುಡಿತದ ಸಕಾರಾತ್ಮಕ ಪರಿಣಾಮಗಳಿಗೆ ಸೂಕ್ಷ್ಮವಾಗಿರುವಂತೆ ತೋರುತ್ತಾರೆ, ಅಂದರೆ ಸಾಮಾಜಿಕ ಸಂದರ್ಭಗಳಲ್ಲಿ ಹೆಚ್ಚು ಸಮಾಧಾನವಾಗಿರುವಂತೆ ಭಾವಿಸುವುದು, ಇಂತಹ ಸಕಾರಾತ್ಮಕ ಸಾಮಾಜಿಕ ಭಾವನೆಗಳಿಗಾಗಿ ಯುವ ಪೀಳಿಗೆಯು ವಯಸ್ಕರಿಗಿಂತಲೂ ಹೆಚ್ಚು ಕುಡಿಯುವ ಸಾಧ್ಯತೆಗಳಿರುತ್ತವೆ.
ವೈಯಕ್ತಿಕ ಗುಣಲಕ್ಷಣಗಳು ಮತ್ತು ಮಾನಸಿಕ ಸಹವ್ಯಾಪನೆ—ಬಹಳ ಮುಂಚಿನ ವಯಸ್ಸಿನಲ್ಲಿ ಕುಡಿಯಲು ಪ್ರಾರಂಭಿಸುವ ಮಕ್ಕಳು ಹೆಚ್ಚಾಗಿ ಕುಡಿತವನ್ನು ಪ್ರಾರಂಭಿಸುವ ಗುಣಲಕ್ಷಣಗಳಿಗೆ ಹೋಲಿಕೆಯಾಗುತ್ತವೆ. ವಿಚ್ಛಿದ್ರಕಾರಕ, ಕ್ರಿಯಾಶೀಲ ಮತ್ತು ಆಕ್ರಮಣಕಾರಿಯಾಗಿರುವಂತಹ ಯುವ ಜನರು ಹೆಚ್ಚಾಗಿ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರು—ಅಲ್ಲದೆ ಖಿನ್ನತೆ, ಏಕಾಂತ ಪ್ರವೃತ್ತಿಯ ಅಥವಾ ಆತಂಕದಿಂದಿರುವವರು ಮದ್ಯಸಾರ ಸಮಸ್ಯೆಗಳ ಹೆಚ್ಚು ಸಮಸ್ಯೆಗೆ ಕಾರಣವಾಗುತ್ತಾರೆ. ಮದ್ಯಸಾರದ ಬಳಕೆಯಿಂದಾಗಿ ಬಂಡಾಯಗಾರಿಕೆ, ತೊಂದರೆ ಅಥವಾ ಹಾನಿಕಾರಕ ಸಂದರ್ಭಗಳನ್ನು ತಪ್ಪಿಸುವಲ್ಲಿ ಸಮಸ್ಯೆ, ನಿಯಮಗಳು ಅಥವಾ ಇತರ ಭಾವನೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವುದರಂತಹ ಇತರ ವರ್ತನೆಯ ಸಮಸ್ಯೆಗಳನ್ನು ಒಳಗೊಂಡಿರುತ್ತದೆ.
(ವೈದ್ಯಕೀಯದಲ್ಲಿ, ಸಹವ್ಯಾಪನೆ ಎಂದರೆ ಒಂದು ಅಥವಾ ಹೆಚ್ಚಿನ ಅಸ್ವಸ್ಥತೆಗಳು (ಅಥವಾ ಕಾಯಿಲೆಗಳು) ಪ್ರಾಥಮಿಕ ಕಾಯಿಲೆ ಅಥವಾ ಅಸ್ವಸ್ಥತೆಯೊಂದಿಗೆ ಸಹಯೋಗದ ಅಸ್ತಿತ್ವವಾಗಿರುತ್ತದೆ; ಅಥವಾ ಅಂತಹ ಹೆಚ್ಚುವರಿ ಅಸ್ವಸ್ಥತೆಗಳು ಅಥವಾ ಕಾಯಿಲೆಗಳ ಪರಿಣಾಮವಾಗಿರುತ್ತದೆ. ಹೆಚ್ಚುವರಿ ಅಸ್ವಸ್ಥತೆಯು ವರ್ತನೆ ಅಥವಾ ಮಾನಸಿಕ ಅಸ್ವಸ್ಥತೆಯಾಗಿರಬಹುದು.)
ಅನುವಂಶಿಕ ಅಂಶಗಳು—ಕೆಲವೊಂದು ನಡವಳಿಕೆ ಮತ್ತು ಶಾರೀರಿಕ ಅಂಶಗಳು ವ್ಯಕ್ತಿಯ ಆಲ್ಕೋಹಾಲ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿಸುತ್ತದೆ, ಜೊತೆಗೆ ಅವರ ತಾಳ್ಮೆಯ ಮೇಲೂ ಪರಿಣಾಮಬೀರುತ್ತದೆ, ಇದಕ್ಕೆಲ್ಲಾ ಮುಖ್ಯವಾಗಿ ಅನುವಂಶಿಕ ಕಾರಣವೂ ಆಗಿರಬಹುದು. ಉದಾಹರಣೆಗೆ, ಆಲ್ಕೋಹಾಲ್ ಸೇವನೆ ಮಾಡುವ ಕುಟುಂಬದಲ್ಲಿ, ಅನುವಂಶೀಯವಾಗಿ ತಮ್ಮ ಮಕ್ಕಳಿಗೂ ಬರುವ ಸಾಧ್ಯತೆಯಿರುತ್ತದೆ, ಆದರೆ ಇದು ಖಚಿತವೆಂದು ಹೇಳಲಾಗುವುದಿಲ್ಲ. ಮದ್ಯ ಸೇವನೆ (COAಗಳು) ಮಾಡುವಂತಹ ಮಕ್ಕಳು ಸುಮಾರಾಗಿ 4 ರಿಂದ 10 ಪಟ್ಟು ಯಾವುದೇ ಹತ್ತಿರದ ನಿಕಟ ಸಂಬಂಧಿಗಳಿಗೂ ಇಂತಹ ಚಟ ಇರುವ ಸಾಧ್ಯತೆ ರುತ್ತದೆ. COAಗಳು ಸಹ ಚಿಕ್ಕ ವಯಸ್ಸಿನಲ್ಲೇ ಕುಡಿಯುವುದಕ್ಕೆ ಪ್ರಾರಂಭ ಮಾಡುವ ಹೆಚ್ಚು ತ್ವರಿತವಾಗಿ ಕುಡಿಯುವ ಸಮಸ್ಯೆಗಳನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚು.